Skip to main content

Posts

ರಾಜ್ಯ ರಾಜಕಾರಣದಲ್ಲಿ ಸಂಚಲನ ಸೃಷ್ಟಿಸಿದ ನೂತನ ಶಾಸಕ ಅಶೋಕ್ ರೈ ಹೇಳಿಕೆ : ಬಿಜೆಪಿ ಕಾರ್ಯಕರ್ತರಿಗೆ ಹಲ್ಲೆ ಮಾಡಲು ಒತ್ತಡ ಹಾಕಿದವರ ಹೆಸರು ಹೊರ ಬಂದರೆ ರಾಜಕೀಯ ವಲಯದಲ್ಲಿ ಸಂಚಲನ - ಲಿಸ್ಟ್ ಹೊರ ಬಂದರೆ ರಾಜ್ಯದಲ್ಲಿ ಬಹುತೇಕ ಎಂಪಿ ಸೀಟ್ ಕಾಂಗ್ರೆಸ್ ತೆಕ್ಕೆಗೆ - ಈ ಸವಾಲು ಸ್ವೀಕಾರಿಸುತ್ತಾ ಕಾಂಗ್ರೇಸ್..?

ಎರಡು ದಿನದಲ್ಲಿ ಒತ್ತಡ ಹಾಕಿದವರ ಹೆಸರು ಬಹಿರಂಗಪಡಿಸುವೆ: ಶಾಸಕ ಅಶೋಕ್ ರೈ ಪುತ್ತೂರು: ಬ್ಯಾನರ್ ಗೆ ಚಪ್ಪಲಿ ಹಾರ ಹಾಕಿರುವ ಆರೋಪಿಗಳಿಗೆ ಡಿವೈಎಸ್‌ಪಿ ಕಚೇರಿಯಲ್ಲಿ ದೌರ್ಜನ್ಯ ನಡೆಯಲು, ಬಾಸುಂಡೆ ಬರುವ ರೀತಿಯಲ್ಲಿ ಹಲ್ಲೆಯಾಗಲು ಅಧಿಕಾರಿಗಳಿಗೆ ಬಿಜೆಪಿ ನಾಯಕರ ಒತ್ತಡವೇ ಕಾರಣವಾಗಿದೆ, ಯಾರೆಲ್ಲಾ ಅಧಿಕಾರಿಗಳಿಗೆ ಕರೆ ಮಾಡಿ ಒತ್ತಡ ಹಾಕಿದ್ದಾರೋ ಅವರ ಹೆಸರನ್ನು ಎರಡು ದಿನದಲ್ಲಿ ಬಹಿರಂಗಪಡಿಸುವೆ ಎಂದು ಪುತ್ತೂರು ಶಾಸಕ ಅಶೋಕ್ ರೈ ತಿಳಿಸಿದ್ದಾರೆ. ಈ ಒಂದು ಹೇಳಿಕೆ ರಾಜ್ಯ ರಾಜಕೀಯ ವಲಯದಲ್ಲಿ ಸಂಚಲನ ಸೃಷ್ಟಿಸಿದೆ.  ಆ ಒಂದು ಕಾಲ್ ಲಿಸ್ಟ್ ಹೊರ ಬಂದರೆ ಹಲವು ಮುಖಗಳು ಹೊರಬರಲಿದ್ದು,  ಇದರಿಂದ ರಾಜ್ಯದ ಕಾಂಗ್ರೆಸ್ ಸರ್ಕಾರವನ್ನು ಇನ್ನೆರಡು ಅವಧಿ ಯಾವೂದೇ ಹಿಂದೂತ್ವದ ಹೇಳಿಕೆಗಳಿಂದ ಅಲುಗಾಡಿಸಲು ಸಾಧ್ಯವಿಲ್ಲ ಎನ್ನುವ ಅಭಿಪ್ರಾಯ ರಾಜಕೀಯ ವಲಯದಲ್ಲಿ ಕೇಳಿ ಬರುತ್ತಿದೆ.  ಈ ಸವಾಲು ಸ್ವೀಕರಿಸಿ ಅಶೋಕ್ ರೈ ಹೆಸರು ಬಹಿರಂಗ ಪಡಿಸುತ್ತಾರ ಎಂದು ಕಾದು ನೋಡಬೇಕಾಗಿದೆ. ಈ ಒಂದು ಲಿಸ್ಟ್ ಹೊರ ಬಂದರೆ ಹಲವು ಪ್ರಕರಣಗಳು ರೀ ಓಪನ್ ಆಗಲಿದೆ.  ಇದರ ಜೊತೆ ಇನ್ನು ಕೆಲವೇ ತಿಂಗಳಲ್ಲಿ ನಡೆಯುವ  ಎಂಪಿ ಚುನಾವಣೆಗೆ ಪ್ರಬಲ ಅಸ್ತ್ರ ಕಾಂಗ್ರೇಸ್ ಕೈಯಲ್ಲಿ ಇರಲಿದೆ.  ಬ್ಯಾನರ್ ಹಾಕಿದ ಆರೋಪಿಗಳಿಗೆ ಹಲ್ಲೆ ನಡೆಸಿದ್ದು ಕಾಂಗ್ರೆಸ್ಸಿನವರೇ, ಕಾಂಗ್ರೆಸ್ ಸರಕಾರ ಬಂದರೆ ಹೀಗೆಲ್ಲಾ ಆಗುತ್ತದೆ ಎಂದು ಪುತ್ತೂರಿನಲ್ಲಿ ಸುದ್ದಿಗೋಷ್ಟಿಯಲ್ಲಿ ಹೇಳಿಕೆ ನೀಡಿದ ಕಲ್ಲ

ದೇಶದ ರಾಜಕೀಯ ಇತಿಹಾಸದಲ್ಲೇ ಪ್ರಪ್ರಥಮ ಬಾರಿಗೆ ಪುತ್ತೂರಿನಲ್ಲಿ ಒಟ್ಟಾದ ಬಿಜೆಪಿ-ಕಾಂಗ್ರೇಸ್..! ಚೀ.. ಥೂ .. ಎನ್ನುತ್ತಿರುವ ನಿಷ್ಠಾವಂತ ಕಾರ್ಯಕರ್ತರು

ರಾಜಕೀಯ ಇತಿಹಾಸದಲ್ಲೇ ಪ್ರಪ್ರಥಮ ಭಾರಿಗೆ ಬದ್ದ ವಿರೋಧಿಗಳಾಗಿದ್ದ ಬಿಜೆಪಿ ಕಾಂಗ್ರೆಸ್ ಒಂದಾಗಿದೆ.   ಸಿದ್ದಾಂತ ವಿಚಾರವಾಗಿ ಸದಾ ಕಚ್ಚಾಡುವ ಬಿಜೆಪಿ ಹಾಗೂ ಕಾಂಗ್ರೇಸ್ ಬಿಜೆಪಿ ಭದ್ರಕೋಟೆ ಪುತ್ತೂರಿನಲ್ಲಿ ಇದೀಗ ಹಿಂದೂತ್ವದ ಅಡಿಯಲ್ಲಿ ಸ್ಪರ್ಧಿಸುತ್ತಿರುವ ಅರುಣ್ ಕುಮಾರ್ ಪುತ್ತಿಲ ಸ್ಪರ್ಧೆಯಿಂದ ಬಿಜೆಪಿ ಕಂಗೇಟ್ಟಿದೆ.  ಇದೀಗ ಪ್ರಪ್ರಥಮ ಭಾರಿಗೆ ಬಿಜೆಪಿ ಕಾಂಗ್ರೆಸ್ ಒಟ್ಟಿಗೆ ಬೂತ್ ಹಾಕಿ ಕೂತ್ಕೊಳ್ಳುವ ಮಟ್ಟಕ್ಕೆ ಬಂದಿದೆ.   ಪುತ್ತೂರು ವಿಧಾನ ಸಭಾ ಕ್ಷೇತ್ರದ ಹಲವು ಕಡೆ ಕಾಂಗ್ರೇಸ್ ಬಿಜೆಪಿ ಒಟ್ಟಿಗೆ ಬೂತ್ ನಲ್ಲಿ ಕೂತುಕೊಂಡ ದೃಶ್ಯಗಳು ವೈರಲ್ ಆಗಿದೆ. ಈ ದೃಶ್ಯ ಕಂಡು ಬಿಜೆಪಿ ನಿಷ್ಠಾವಂತ ಕಾರ್ಯಕರ್ತರು ಚೀ.. ಥೂ.. ಎಂದು ನಾಯಕರಿಗೆ ಬೈದು ಪುತ್ತಿಲರಿಗೆ ಓಟ್ ಹಾಕಿದ್ದಾರೆ ಎನ್ನಲಾಗಿದೆ. ಪುತ್ತೂರು ವಿಧಾನಸಭಾ ಕ್ಷೇತ್ರದ ಈ ವರ್ಷದ ಸಮೀಕ್ಷೆ ಪ್ರಕಾರ ಪಕ್ಷೇತರ ಅಭ್ಯರ್ಥಿ ಪುತ್ತಿಲ ಭರ್ಜರಿ ಗೆಲುವು ದಾಖಲಿಸಿದ್ದಾರೆ ಎಂಬ ವರದಿ ಇದೆ. 

ಪುತ್ತೂರು : ಸಟ್ಟಾ ಬಜಾರ್ ನಲ್ಲಿ ಪಕ್ಷೇತರ ಪರ ಹವಾ- ಅರುಣ್ ಪುತ್ತಿಲ ಹಾಟ್ ಫೆವರಿಟ್

 ಪುತ್ತೂರು ವಿಧಾನಸಭಾ ಕ್ಷೇತ್ರ ಪಕ್ಷೇತರ ಅಭ್ಯರ್ಥಿ, ಹಿಂದೂ ಮುಖಂಡ ಅರುಣ್ ಕುಮಾರ್ ಪುತ್ತಿಲ ಸ್ಪರ್ಧೆಯಿಂದ ರಣ ರೋಚಕ ಕಣವಾಗಿ ಮಾರ್ಪಾಡಾಗಿದ್ದು, ಹೀಗಾಗಿ ಬೆಟ್ಟಿಂಗ್ ಪ್ರಿಯರ ನೆಚ್ವಿನ ತಾಣವಾಗಿ  ಬದಲಾಗಿದೆ.  ಮೊದಮೊದಲು ಪಕ್ಷೇತರ ಅಭ್ಯರ್ಥಿಯ ಸ್ಪರ್ಧೆ ಕೇವಲ ವೋಟ್ ಕಟರ್ ಎಂಬಂತೆ ಪರಿಗಣಿಸಲಾಗಿತ್ತು. ಆದರೆ ದಿನಗಳು ಕಳೆದಂತೆ ಉಳಿದೆರಡು ರಾಷ್ಟ್ರೀಯ ಪಕ್ಷದ  ಅಭ್ಯರ್ಥಿಗಳಿಗೆ ತೀವ್ರ ಸ್ಪರ್ಧೆಯನ್ನು ನೀಡುವಷ್ಟರ ಮಟ್ಟಿಗೆ ಅವರ ಬೆಂಬಲಿಗರ ಸಂಖ್ಯೆ ಬೆಳೆಯಿತು. ಅರುಣ್ ಪುತ್ತಿಲ ಹೋದಲೆಲ್ಲ ಮತದಾರರು ಅವರನ್ನು ಮುತ್ತಿಕ್ಕಲು ಅರಂಭಿಸಿದ್ದು, ತಡ ರಾತ್ರಿಯವರೆಗೆ ಬೆಂಬಲಿಗರು, ಮತದಾರರು ಅವರಿಗೆ ಕಾದು ಕುಳಿತದ್ದು ಪುತ್ತೂರಿನ ರಾಜಕೀಯ ಕಣದ ಕಾವು ಹೆಚ್ಚಿಸಿತ್ತು. ಅದಾದ ಬಳಿಕ  ಕ್ಷೇತ್ರದ ವಿವಿದೆಡೆ ನಡೆದ ಸಮಾವೇಶ ರೋಡ್ ಶೋಗಳಲ್ಲಿ ಸೇರಿದ ಜನಸ್ತೋಮ ಪುತ್ತೂರಿನಲ್ಲಿ ಯಾವ ಕಡೆ ಹವಾ ಬೀಸುತ್ತಿದೆ ಎಂಬುದನ್ನು ರುಜುವಾತು ಪಡಿಸಿತ್ತು. ಮೇ 8 ರಂದು ಪುತ್ತೂರು ಮುಖ್ಯ ರಸ್ತೆಯಲ್ಲಿ ಪುತ್ತಿಲ ಪರ ನಡೆದ ಬೃಹತ್ ರೋಡ್ ಶೋ ಪುತ್ತೂರಿನ ರಾಜಕೀಯದ ದಿಕ್ಕನ್ನೇ ಬದಲಾಯಿಸಿದೆ.  ಈ ರೋಡ್ ಶೋದ ಬಳಿಕ ಬೆಟ್ಟಿಂಗ್ ದುನಿಯಾದಲ್ಲಿ ಎರಡನೇ ಸ್ಥಾನದಲ್ಲಿದ್ದ   ಪುತ್ತಿಲ ಗೆಲುವಿನ ಕುದುರೆಯಾಗಿ ಮಾರ್ಪಡಾಗಿದ್ದಾರೆ ಎಂದು ಸಟ್ಟಾ ಬಜಾರ್ ನ ಮೂಲಗಳಿಂದ ತಿಳಿದು ಬಂದಿದೆ.   ಅದಕ್ಕೂ ಮೊದಲು ಬಿಜೆಪಿ ಹಾಗೂ ಪಕ್ಷೇತರ ಮತಗಳು ಇಬ್ಬಾಗಗೊಳ್ಳುವುದರಿಂದ ಕಾಂಗ್ರೆಸ್ ಅಭ್ಯರ

ಮಹಾಸಂಗಮದ ಜನಸ್ತೋಮ ಕಂಡು ಪುತ್ತಿಲ ಪರ ಬ್ಯಾಟ್ ಬೀಸಲು ಆರಂಭಿಸಿದ ಬಿಜೆಪಿ ಮುಖಂಡರು - ಒಬ್ಬೊಬ್ಬರೇ ಗುಟ್ಟಾಗಿ ಕರೆ ಮಾಡಿ ಬೆಂಬಲ

  ಪುತ್ತೂರಿನಲ್ಲಿ ನಿನ್ನೆಯ ದಿನ ನಡೆದ ಪಕ್ಷೇತರ ಅಭ್ಯರ್ಥಿ ಅರುಣ್ ಕುಮಾರ್ ಪುತ್ತಿಲ ಅವರ ಚುನಾವಣಾ ಪ್ರಚಾರ ರ್ಯಾಲಿ ಅತ್ಯಂತ ಯಶಸ್ವಿಯಾಗಿ ಸುಮಾರು 15000ಕ್ಕೂ ಮಿಕ್ಕಿದ ಜನಸ್ತೋಮದೊಂದಿಗೆ ಸಂಪನ್ನವಾಯಿತು.  ಚುನಾವಣಾ ರ್ಯಾಲಿ  ಹಿಂದೂ  ಸಮಾಜೋತ್ಸವ ಮಾದರಿಯಲ್ಲಿ ಕಂಡು ಬಂದಿತ್ತು. ಸಹಸ್ರ ಸಹಸ್ರ ಸಂಖ್ಯೆಯಲ್ಲಿ ಕಾರ್ಯಕರ್ತರು ಅರುಣ್ ಕುಮಾರ್ ಪುತ್ತಿಲ ಪರ ಘೋಷಣೆ ಕೂಗುತ್ತ ಬೊಳುವಾರು ಆಂಜನೇಯ ಮಂತ್ರಾಲಯದ ಬಳಿಯಿಂದ ದರ್ಬೆ ವೃತ್ತದವರೆಗೆ ಮೆರವಣಿಗೆಯಲ್ಲಿ ಸಾಗಿದ್ದರು. ಈ ಅಭೂತಪೂರ್ವ ಕಾರ್ಯಕ್ರಮದ ಜನ ಸಾಗರವನ್ನು ವೀಕ್ಷಿಸಿದ ಬಳಿಕ ಪುತ್ತೂರಿನಲ್ಲಿ ಬಿಜೆಪಿ ಸೋಲು ಖಚಿತ ಎಂದು ನಾಯಕರು ತೀರ್ಮಾನಕ್ಕೆ ಬಂದಿದ್ದಾರೆ. ಅಶೋಕ್ ಕುಮಾರ್ ರೈ ಗೆಲುವನ್ನು ತಪ್ಪಿಸಲು ಎಲ್ಲಾ ಬಿಜೆಪಿ ಮತಗಳನ್ನು ಅರುಣ್ ಪುತ್ತಿಲ ಪರವಾಗಿ ಚಲಾವಣೆ ಮಾಡುವ ಮೂಲಕ ಹಿಂದೂ ಮತಗಳು ನಷ್ಟವಾಗುವುದನ್ನು ತಡೆಯುವುದು. ಹೇಗೂ ಪುತ್ತಿಲ ಗೆದ್ದ ಬಳಿಕ ಬಿಜೆಪಿಗೆ ಬೆಂಬಲ ಸೂಚಿಸುವುದು ಎಂದು ಈಗಾಗಲೇ ಘೋಷಿಸಿರುವ ಕಾರಣ ಬಿಜೆಪಿಯ ಒಂದು ಸೀಟ್ ಭದ್ರಗೊಳಿಸುವುದು ಈ ಹಿರಿ ತಲೆಗಳ ಲೆಕ್ಕಾಚಾರ.  ಹಿಂದೂ ಮತಗಳು ಒಡೆದು  ಕಾಂಗ್ರೆಸ್ ಪಕ್ಷಕ್ಕೆ ಲಾಭವಾಗುವುದು ಬೇಡ, ನಮ್ಮದೇ ತತ್ವ ಸಿದ್ದಾಂತದ ಅಭ್ಯರ್ಥಿ ಗೆದ್ದು ನಮ್ಮನ್ನು ಬೆಂಬಲಿಸುವುದು ಸೂಕ್ತ ಎಂಬ ತೀರ್ಮಾನಕ್ಕೆ ಕೆಲ ನಾಯಕರು ಬಂದಿದ್ದಾರೆ. ಪುತ್ತಿಲ ಬೆಂಬಲಿಸಿ ಕಾಂಗ್ರೆಸ್ ಸೋಲಿಸುವುದು ಪಕ್ಷದ ಹಿತ ದೃಷ್ಟಿಯಿಂದಲೂ ಒಳ್ಳೆಯದು ಎಂ

ರಾಮಚಂದ್ರಾಪುರ ಮಠವನ್ನು ರಾಜಕೀಯ ಲಾಭಕ್ಕೆ ಎಳೆದರು... ? ಸಿಟ್ಟಾದ ಮಠದ ಭಕ್ತರು ನಿಲುವು ಬದಲಿಸಿದರು...!

  ಯಾವ ರಾಜಕೀಯ ಲೇಪಕ್ಕೂ ಇಲ್ಲದ ರಾಮಚಂದ್ರಾಪುರ ಮಠವನ್ನು ರಾಜಕೀಯಕ್ಕೆ ಎಳೆದು ತಂದಿರುವ ಕಾರಣ ಮಠದ ಭಕ್ತರು ಸಿಟ್ಟಾಗಿದ್ದಾರೆ. ಹೀಗಾಗಿ ತಮ್ಮ ನಿಲುವುಗಳನ್ನು ಎಲ್ಲೂ ಬಹಿರಂಗಪಡಿಸಬೇಡಿ ಹಾಗೂ ರಾಜಕೀಯ ರಹಿತವಾದ ನಿರ್ಧಾರವನ್ನು  ಪುತ್ತೂರಿನಲ್ಲಿ ತಳೆಯಿರಿ ಹಾಗೂ ಇತರ ಕಡೆಗಳಲ್ಲಿ ನಿಮಗೆ ಹಾಗೂ ಮಠಕ್ಕೆ ಯಾರು ಹಿತವರು ಎನಿಸುತ್ತಾರೆ ಅವರಿಗೆ ಮತ ನೀಡಿ ಎಂದು ಮಠದ ಭಕ್ತರು ಕರೆ ನೀಡಿದ್ದಾರೆ. ಪುತ್ತೂರು ರಾಜಕೀಯವನ್ನು ಕೇಂದ್ರವಾಗಿರಿಸಿ ಬಿಜೆಪಿಯು ರಾಜಕೀಯಕ್ಕೆ ಮಠವನ್ನು ಎಳೆದು ತಂದಿತ್ತು. ಇದರ ಹಿಂದೆ ಕೆಲವು ಮಂದಿಯ ಕೈವಾಡ ಕಂಡುಬಂದಿತ್ತು. ಮಠವು ಯಾವಾಗಲೂ ಎಲ್ಲರ ಜೊತೆ ಉತ್ತಮ ಒಡನಾಟ ಹೊಂದಿತ್ತು. ಪುತ್ತೂರಿನಲ್ಲಿ ಬಿಜೆಪಿಗೆ ಮತ ನೀಡಬೇಕು ಎಂದು ಪೋಸ್ಟರ್‌ ಕೂಡಾ ತಯಾರಿಸಿ ಸಾಮಾಜಿಕ ಜಾಲತಾಣಗಳಲ್ಲಿ  ಹರಿಯಬಿಟ್ಟಿತ್ತು. ಇದನ್ನೇ ಪೇಸ್‌  ಬುಕ್ ನಲ್ಲಿಯೂ ಹಾಕಲಾಗಿತ್ತು. ಇದಾಗಿ ಕೆಲವೇ ಹೊತ್ತಲ್ಲಿ ಚರ್ಚೆಯಾಯಿತು. ತಕ್ಷಣವೇ ಈ ಪೋಸ್ಟ್‌ ಡಿಲೀಟ್‌ ಮಾಡಲಾಗಿತ್ತು. ಮಠದ ಭಕ್ತರ ನಡುವೆ ಚರ್ಚೆ ಆರಂಭವಾಗಿ ಅನೇಕರು ಈ ನಿರ್ಧಾರಕ್ಕೆ ಬೆಂಬಲ ಇಲ್ಲ ಎಂದು ಘೋಷಿಸಿದರು.  ಅದಾದ ನಂತರ ನಡೆದ ಬೆಳವಣಿಗೆಯಲ್ಲಿ  ರಾಜಕೀಯ ರಹಿತವಾದ ನಿರ್ಧಾರವನ್ನು  ಪುತ್ತೂರಿನಲ್ಲಿ ತಳೆಯಿರಿ ಹಾಗೂ ಇತರ ಕಡೆಗಳಲ್ಲಿ ನಿಮಗೆ ಹಾಗೂ ಮಠಕ್ಕೆ ಯಾರು ಹಿತವರು ಎನಿಸುತ್ತಾರೆ ಅವರಿಗೆ ಮತ ನೀಡಿ ಎಂದು ಮಠದ ಭಕ್ತರು ಕರೆ ನೀಡಿದ್ದಾರೆ. ಈ ಮೂಲಕ ಮಠವನ್ನು ರಾಜಕೀಯಕ್ಕೆ ಎಳೆದು ತರ

ಪುತ್ತೂರಿನಲ್ಲಿ ಪುತ್ತಿಲ ಪರಿಣಾಮ | ಹಿಂದೂ ಸಂಘಟನೆಗಳ ಮೇಲೆಯೇ ಗರಂ ಆದ ಬಿಜೆಪಿ | ಬಜರಂಗದಳ ಕಾಂಗ್ರೆಸ್‌ ನಿಷೇಧ ಮಾಡಿದರೆ | ರಾಜ್ಯದಲ್ಲಿ ಹಿಂದೂ ಜಾಗರಣ ವೇದಿಕೆ ಬರ್ಕಾಸ್ತು ಮಾಡಲು ಸಂಘಪರಿವಾರಕ್ಕೆ ಬಿಜೆಪಿ ಒತ್ತಡ ..?

ಚುನಾವಣೆಯ ಪರಿಣಾಮದಿಂದ ರಾಜ್ಯದಲ್ಲಿ  ಹಿಂದೂ ಸಂಘಟನೆಗಳ ಮೇಲೆಯೇ ಈಗ ಬಿಜೆಪಿ ಗರಂ ಆಗಿದೆ. ಒಂದು ಕಡೆ ಕಾಂಗ್ರೆಸ್‌ ಬಜರಂಗದಳವನ್ನು  ನಿಷೇಧ ಮಾಡುವ ಹೇಳಿಕೆ ನೀಡಿದ್ದರೆ, ಹಿಂದೂ ಜಾಗರಣ ವೇದಿಕೆಯನ್ನು ಬರ್ಕಾಸ್ತು ಮಾಡಬೇಕು ಎಂದು ಸಂಘಪರಿವಾರಕ್ಕೆ ಬಿಜೆಪಿ ಒತ್ತಡ ಹೇರುತ್ತಿದೆ ಎನ್ನುವುದು  ಈಗ ತಿಳಿದುಬಂದಿರುವ ಮಾಹಿತಿ. ಬಜರಂಗದಳವನ್ನು ನಿಷೇಧ ಮಾಡುವ ಬಗ್ಗೆ ಕಾಂಗ್ರೆಸ್‌ ತನ್ನ ಪ್ರಣಾಳಿಕೆಯಲ್ಲಿ  ತಿಳಿಸಿದೆ. ಹೀಗಾಗಿ ಚರ್ಚೆಗಳು ನಡೆಯುತ್ತಿತ್ತು. ಆದರೆ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನಲ್ಲಿ  ನಡೆದ ರಾಜಕೀಯ ಬೆಳವಣಿಗೆಯಲ್ಲಿ  ಪಕ್ಷೇತರ ಅಭ್ಯರ್ಥಿಯಾಗಿ ಅರುಣ್‌ ಕುಮಾರ್‌ ಪುತ್ತಿಲ ಅವರು ಹಿಂದುತ್ವದ ಆಧಾರದಲ್ಲಿ ಕಾರ್ಯಕರ್ತರ ಅಭ್ಯರ್ಥಿಯಾಗಿ ಕಣಕ್ಕೆ ಇಳಿದಿದ್ದರು. ಅದರ ಬೆನ್ನಿಗೇ ಅರುಣ್‌ ಕುಮಾರ್‌ ಅವರಿಗೆ ಹಿಂದೂ ಜಾಗರಣ ವೇದಿಕೆ ಬೆಂಬಲ ನೀಡಿತ್ತು ಹಾಗೂ ಅನೇಕ ಕಾರ್ಯಕರ್ತರು ಪ್ರಚಾರದಲ್ಲೂ ಭಾಗವಹಿಸಿದ್ದರು. ಹಿಂದುತ್ವದ ಆಧಾರದಲ್ಲಿಯೇ ಎಲ್ಲಾ ಕಾರ್ಯಕರ್ತರು ಕೆಲಸ ಮಾಡಿದ್ದರು. ಇದರಿಂದ ಬಿಜೆಪಿಯ ಕಣ್ಣು ಹಿಂದೂ ಜಾಗರಣ ವೇದಿಕೆಯ ಮೇಲೆ ಬಿದ್ದಿದೆ.  ಇದಕ್ಕಾಗಿ ಹಿಂದೂ ಜಾಗರಣ ವೇದಿಕೆಯನ್ನು  ರಾಜ್ಯದಲ್ಲಿ ಬರ್ಕಾಸ್ತು ಮಾಡಬೇಕು, ಇಲ್ಲಿ ಬಜರಂಗದಳ ಇರುವುದರಿಂದ ಎರಡನ್ನೂ ಒಂದೇ ಮಾಡಬೇಕು ಎಂದು ಒತ್ತಾಯ ಮಾಡಿತ್ತು. ಸಂಘ ಪರಿವಾರದ ಬೈಟಕ್‌ ನಲ್ಲಿ  ಈ ಬಗ್ಗೆ ಚರ್ಚೆಯನ್ನೂ ಮಾಡಿತ್ತು. ಸಂಘಪರಿವಾರ ಕೂಡಾ ಈ ಬಗ್ಗೆ ಯೋಚಿಸುವುದಾಗಿ ಹೇ

ಭಟ್ರಲ್ಲಿಗೆ ಭಟ್ರುಗಳು, ಶೆಟ್ರಲ್ಲಿಗೆ ಶೆಟ್ರುಗಳು, ಗೌಡ್ರಲ್ಲಿಗೆ ಗೌಡ್ರುಗಳು, ವಿಶ್ವಕರ್ಮರಲ್ಲಿ ವಿಶ್ವಕರ್ಮ ಜಾತಿ ಸಂಘಟನೆ ನಾಯಕರ ಮನೆ ಭೇಟಿ - ಸದ್ಯದಲ್ಲೇ ಭೇಟಿ ಮಾಡುವವರ ವಿಡಿಯೋ ಬಿಡುಗಡೆ..! : ಪುತ್ತಿಲರ ಗೆಲುವಿನ ಅಂತರ ಕಡಿಮೆ ಮಾಡಲು ಸಂಘದ ಭದ್ರಕೋಟೆಯಲ್ಲಿ ಜಾತಿ ಸಂಘಟನೆ ಮೊರೆ ಹೋದ ಬಿಜೆಪಿ..!

   ಸಂಘದ ಭದ್ರಕೋಟೆ, ಪರೀಕ್ಷಾ ಕೇಂದ್ರ ಎಂದೆಲ್ಲ ಹೆಸರುವಾಸಿಯಾದ  ಪುತ್ತೂರಿನಲ್ಲಿ ಬಿಜೆಪಿ ಜಾತಿ ಸಂಘಟನೆಯ ಮೊರೆ ಹೋಗುವ ಪರಿಸ್ಥಿತಿಗೆ ಬಂದಿದೆ.   ಹಿಂದೂ ಫೈರ್ ಬ್ರಾಂಡ್,  ದೇಶವೇ ಪುತ್ತೂರಿನತ್ತ ತಿರುಗಿ ನೋಡುವಂತೆ ಮಾಡಿದ ಅರುಣ್ ಕುಮಾರ್  ಪುತ್ತಿಲರ 'ಬ್ಯಾಟ್' ಚಿಹ್ನೆಯಡಿ ಪಕ್ಷೇತರ ಸ್ಪರ್ಧೆಗೆ ರಾಷ್ಟ್ರೀಯ ಪಕ್ಷಗಳೇ ದಿಕ್ಕೆಟ್ಟು ಹೋಗಿವೆ.  ಗುಪ್ತಚಾರ ಮಾಹಿತಿ, ಮಾಧ್ಯಮ ಸರ್ವೆ ಪ್ರಕಾರ ಪುತ್ತಿಲರ ಗೆಲುವು ನಿಶ್ಚಿತವಾಗುತ್ತಿದೆ ಎಂಬ ಮಾಹಿತಿ ಅರಿತ ಬಿಜೆಪಿಯವರು ಅವರ  ಗೆಲುವನ್ನು ತಡೆದು ತಮ್ಮ ಓರ್ವ ಹೈಕಮಾಂಡ್ ನಾಯಕರ ಆಪ್ತನ ಗೆಲ್ಲಿಸಲು  ಸ್ಥಳೀಯ ಬಿಜೆಪಿ ನಾಯಕರು  ಹಿಂದೂತ್ವದ ಭದ್ರಕೋಟೆಯಲ್ಲಿ ಜಾತಿ ಸಂಘಟನೆಯ ಮೊರೆ ಹೋಗಿದ್ದಾರೆ.  ಭಟ್ರಲ್ಲಿಗೆ ಭಟ್ರ ಸಂಘಟನೆಯವರು,  ಗೌಡ್ರಲ್ಲಿಗೆ ಗೌಡರ ಸಂಘಟನೆಯವರು,  ವಿಶ್ವಕರ್ಮರಲ್ಲಿ ವಿಶ್ವಕರ್ಮ ಸಂಘಟನೆಯವರು,  ಬಂಟರಲ್ಲಿ ಬಂಟರ ಜಾತಿ ಸಂಘಟನೆಯವರನ್ನು ಮನೆ ಮನೆ ಹೋಗಿ ಮನ ಪರಿವರ್ತನೆಯ  ಪ್ರಯತ್ನ ನಡೆಸುತ್ತಿದ್ದಾರೆ. ಅಲ್ಲಿ ಹೋಗಿ ಪಕ್ಷೇತರ ಅಭ್ಯರ್ಥಿ ಪುತ್ತಿಲರಿಗೆ ಓಟ್ ಹಾಕಲೇಬೇಡಿ ಎಂಬ ಮನವಿ ಮಾಡಿಕೊಳ್ಳುತ್ತಿದ್ದಾರೆ.   ಶಾಲೆಯಲ್ಲಿ ಉಚಿತ ಸೀಟ್,  ಹಣಕಾಸು ಸಹಕಾಸು,  ಆಸ್ಪತ್ರೆ ಸಹಾಯದಂತ ಇಷ್ಟರವರೆಗೆ ಅವರ ಬಾಯಿಂದ ಕೇಳದಂತಹ ಭರವಸೆ ಕೊಡುತಿದ್ದಾರೆ.   ಈ ನಡುವೆ ಕಾರ್ಯಕರ್ತರು ಗುಪ್ತ ಕ್ಯಾಮರಾ ಮೂಲಕ ಮಾಡಿದ ಚರ್ಚೆಯ ವಿಡಿಯೋ ಅಲ್ಬಂ ರೂಪದಲ್ಲಿ ಬಿಡುಗಡೆಯಾಗಲಿದೆ.  ಈ ನಡ